INKannada.NetDiscover Kannada cinema
Opens in a new tab
← Movie: Premada Oorali

Avvananta Appanivanu Song Video & Lyrics

Watch Avvananta Appanivanu and explore available lyrics, singer and music credits, star cast, release details and its linked movie.

0
0 out of 5 stars (based on 0 reviews)
0 favourites
Your favourite songs

Track 4 · seconds

Watch song video

INKannada.Net

Press Play to listen with sound. · Premada Oorali — Avvananta Appanivanu

ಕನ್ನಡ ಸಾಹಿತ್ಯ · Kannada lyrics

( ಪಲ್ಲವಿ ) ಭುಜದ ಮೇಲೆ ಹೊತ್ತ ದೊರೆಯೋ ಉಸಿರ ಕೊಟ್ಟು ಹರಸೊ ಧರೆಯೋ ಗುಡುಗಿ ಸುರಿಯೊ ಪ್ರೀತಿ ಮಳೆಯೋ ಹಸಿರಿಗೆ ಅನ್ನವಿಟ್ಟು ಹರಿಯೊ ನದಿಯೋ ಅವ್ವನಂತ ಅಪ್ಪನಿವನು ಬೆರಳ ಹಿಡಿದು ನಡೆಸಿದವನು ದೃಷ್ಟಿಯು ತಾಕದಿರಲೀ ಶಿವನೇ ತಂದಾನ ನಾನ ತಂದನಾನ ತಂದನಾನ ತಂದಾನ ನಾನ ತಂದನಾನ ತಂದನಾನ ( ಚರಣ ) ಎಲ್ಲಾರ ಮನೆಯನ್ನ ಬೆಳಗೋದೆ ದೀಪ ದೀಪದ ಬತ್ತಿಯಾಗಿ ಉರಿಯೋನು ಅಪ್ಪ ಕನಸನ್ನ ಕಂಡು ನೀನು ಕನವರಿಸಬೇಕು ನನಸಾಗಿಸಲು ಅವನ ಹೆಗಲೊಂದೆ ಸಾಕು ಆಕಾಶಕೊಮ್ಮೆ ಹಾರಿ ನೋಡು ನಿಂತಲ್ಲೇ ನಿಂತು ನಗುತಾನೊ ತಾನು ಅವ್ವನಂತ ಅಪ್ಪನಿವನು ಬೆರಳ ಹಿಡಿದು ನಡೆಸಿದವನು ದೃಷ್ಟಿಯು ತಾಕದಿರಲೀ ಶಿವನೇ ತಂದಾನ ನಾನ ....... ( ಚರಣ ) ಎದೆಯೊಳಗೆ ಪ್ರೀತಿಯ ಬಚ್ಚಿಡುವ ಕಳ್ಳ ಹೋರಾಟವೆಲ್ಲ ನಿನಗಾಗೆ ಕೇಳ ಬೆವರಿನ ಮಳೆಯಾಗ ನೆನದೂ ನಿಂತಾನೂ ಕೊಡೆಯೊಂದು ಕೈಲಿಹುದು ಕೆಳಗಿರುವೆ ನೀನು ಅಂಗಾಲ ಒಮ್ಮೆ ಕಣ್ಣಿಟ್ಟು ನೋಡು ಕಾಣುತ್ತೆ ಪ್ರೀತಿ ಕೈ ಮುಗಿದು ಹಾಡು ಅವ್ವನಂತ ಅಪ್ಪನಿವನು ಬೆರಳ ಹಿಡಿದು ನಡೆಸಿದವನು ದೃಷ್ಟಿಯು ತಾಕದಿರಲೀ ಶಿವನೇ ತಂದಾನ ನಾನ ....... ( ಪಲ್ಲವಿ )

English lyrics

Song reviews

Rate this song from 1 to 5 stars and share what you think.

There are no reviews yet. Be the first one to write one.

Your favourite songs

Save songs without registering. Your guest favourites are remembered in this browser.

      No favourite songs yet. Tap Favorite above to save this song.